Ads 768x60px

Solar Mobile Charger

ಸೌರ ಮೊಬೈಲ್ ಛಾರ್ಜರ್  :

          ಹಗಲಿನ ಹೊತ್ತಿನಲ್ಲಿ ಸೂರ್ಯನ ಕಿರಣಗಳಿರುವಾಗ ಎಲ್ಲೆಂದರಲ್ಲಿ  ಮೊಬೈಲ್ ಬ್ಯಾಟರಿಯನ್ನು ಛಾರ್ಜ್ ಮಾಡಲು ಬಳಸುವ ಸರಳ ಸಾಧನ.

          ಸೌರ ಛಾರ್ಜ್‍ರ್‍ನ್ನು ಸೌರ ಫೋಟೊವೋಲ್ಟಾಯಿಕ್ ಪ್ಯಾನಲ್‍ಗಳಿಂದ ಮಾಡಲಾಗಿರುತ್ತದೆ. ಈ ಛಾರ್ಜರ್‍ಗಳು 6 ರಿಂದ 9 ವೋಲ್ಟ್‍ನಷ್ಟು ಶಕ್ತಿಯನ್ನು ನೀಡುತ್ತದೆ.

          ಇವನ್ನು ರಕ್ಷಣಾ ಪಡೆಯಲ್ಲಿ ಚಾರಣ (ಟ್ರೆಕ್ಕಿಂಗ್) ಸಂದರ್ಭದಲ್ಲಿ ಪ್ರಯಾಣದ ಸಮಯದಲ್ಲಿ ಬಳಸಲಾಗುತ್ತದೆ. ಇವುಗಳಿಂದ ವಾಕಿಟಾಕಿ, ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಛಾರ್ಜ್ ಮಾಡಬಹುದು.


ಸೌರ ಶ್ರವಣ ಯಂತ್ರ :-
ಅಗತ್ಯಗಳು :

1. ‘ಎ ಎ’ ಗಾತ್ರದ ಎನ್-ಐ-ಸಿಡಿ ಬ್ಯಾಟರಿಗಳು

2. ಚಾರ್ಜರ್ ಷೆಲ್ ಹೋಲ್ಡರ್,  3. ಸೌರ ಫಲಕ

ಕಾರ್ಯವಿಧಾನ :  
1)  2 ‘ಎ ಎ’ ಗಾತ್ರ ಎನ್-ಐ-ಸಿಡಿ ಬ್ಯಾಟರಿಗಳಲ್ಲಿ ಒಂದನ್ನು ಚಾರ್ಜರ್ ಷೆಲ್ ಹೋಲ್ಡರ್‍ದಲ್ಲಿ ಲೋಡ್ ಮಾಡಬೇಕು.

2) ಇನ್ನೊಂದು ಬ್ಯಾಟರಿಯನ್ನು ಬ್ಯಾಟರಿ ಷೆಲ್‍ನ್ನು ಶ್ರವಣಯಂತ್ರಕ್ಕೆ ಅಳವಡಿಸಿ ನಂತರ ಚಾರ್ಜರ್‍ನ್ನು ಓಪನ್ ಮಾಡಿ ಅದರೊಳಗಿನ ಸೌರಫಲಕದ ಮೇಲೆ ಸೂರ್ಯಕಿರಣ ಸತತವಾಗಿ ಬೀಳುವಂತೆ ಇಡಬೇಕು.

3) ಚಾರ್ಜ ಆದ ಬ್ಯಾಟರಿಯನ್ನು ಸೋಲಾರ್ ಚಾರ್ಜರ್‍ನಿಂದ ತೆಗೆದು ಶ್ರವಣ ಯಂತ್ರಕ್ಕೆ ಅಳವಡಿಸಬೇಕು.

    ಈ ಬ್ಯಾಟರಿಗಳನ್ನು ಚಾರ್ಜ ಮಾಡಲು ಈ ಸೌರ ಚಾರ್ಜರ್‍ನ್ನು ಬಳಸಬಾರದು. ಇದಕ್ಕೆ ನೀರು ತಾಗದಂತೆ ನೋಡಿಕೊಳ್ಳಬೇಕು.