Ads 768x60px

Solar Traffic Signals

ಸೌರ ಟ್ರಾಫಿಕ್ ಸಿಗ್ನಲ್ ದೀಪಗಳು :
















       ಸ್ವಯಂ ಚಾಲಿತ ಟ್ರಾಫಿಕ್ ಸಿಗ್ನಲ್ಸ್ ದೀಪಗಳು ಹಾಗೂ ಟ್ರಾಫಿಕ್ ಬೂತ್‍ಗಳು ಜನತೆಗೆ ಸುರಕ್ಷಿತವಾಗಿ ರಸ್ತೆ ದಾಟಲು, ಸೂಚನೆ ನೀಡಲು ಉಪಯುಕ್ತವಾಗಿವೆ.

       ಈ ಸೌರ ದೀಪಗಳು “ಫೋಟೊವೋಲ್ಟಾಯಿಕ್” ವ್ಯವಸ್ಥೆಯಿಂದ ವಿದ್ಯುತ್‍ನ್ನು ಸಂಗ್ರಹಿಸಿ ಬೆಳಕು ಚೆಲ್ಲುತ್ತವೆ. ಅವುಗಳಿಗೆ ಯಾವುದೇ ತಂತಿ ಜೋಡಣೆ, ರಸ್ತೆ ಅಗೆಯುವ ಅವಶ್ಯಕತೆಯಿಲ್ಲ. ಸೌರದೀಪಗಳಿಗೆ ಎಲ್.ಇ.ಡಿ ಮಾದರಿಯ ಬಲ್ಬ್‍ಗಳನ್ನು ಬಳಸಲಾಗುತ್ತದೆ. ಇವು ಕಡಿಮೆ ಶಕ್ತಿ ವ್ಯಯಿಸಿ ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತವೆ. ಇದರಲ್ಲಿ ಶಕ್ತಿ ಪರಿವರ್ತನಾ ಅಂಶ ಶೇ.100 ರಷ್ಟಿರುತ್ತದೆ. ಎಲ್.ಇ.ಡಿ ಬಿಸಿಯಾಗದೇ ಬೆಳಕು ಕೊಡುತ್ತದೆ ಮತ್ತು ಕಡಿಮೆ ವೋಲ್ಟೇಜ್‍ದಲ್ಲಿ ಕಾರ್ಯನಿರ್ವಹಿಸುತ್ತದೆ.

       ಸೌರ ದೀಪದಿಂದ ಹೊರಹೊಮ್ಮುವ ತೀಕ್ಷ್ಣ ಪ್ರಭೆಯಿಂದಾಗಿ ಟ್ರಾಫಿಕ್ ಸಂಕೇತಗಳು ಎಂತಹ ವಾತಾವರಣದಲ್ಲೂ ದೂರದಿಂದ ಸ್ಪಷ್ಟವಾಗಿ ಕಾಣಿಸಿ ಬಹಳ ದಿನ ಬಾಳಿಕೆ ಬರುತ್ತವೆ.